College Campus

Friday 2 December 2016

Celebrations of Kanaka Jayanthi, Kannada Rajyothsthva And Tanlent Hunt Awarding Ceremony (V to PUC)

ನಗರದ ಬೋಗಾದಿಯಲ್ಲಿರುವ ಹರಿ ವಿದ್ಯಾಲಯ ಶಾಲೆಯಲ್ಲಿ ಕನಕದಾಸ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಶುಭ ಸಮಾರಂಭದಲ್ಲಿ 2016-17ನೇ ಸಾಲಿನಲ್ಲಿ ನಡೆಸಲಾದ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ಕನ್ನಡ ಪ್ರಾಧ್ಯಾಪಕರು ಹಾಗೂ ದಾಸ ಸಾಹಿತ್ಯದ ಚಿಂತಕರಾದ ಶ್ರೀಮತಿ ರಮಾ.ವಿ.ಬೆನ್ನೂರು ರವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ 'ಭಾರತ ದೇಶ ಅನೇಕ ಸಂಪತ್ತನ್ನು ಹೊಂದಿರುವುದಷ್ಟೆ ಅಲ್ಲದೇ ಭಾವನೆಗಳಿಗೆ ಹಾಗೂ ನಾಗರೀಕತೆಗಳಿಗೆಲ್ಲ ಮೂಲವಾಗಿದೆ. ಈ ದೇಶದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು' ಎಂದು ಹೇಳಿದರು. ನಂತರದಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರೊ.ಕೆ.ವಿ.ಸತ್ಯನ್ ಅವರು ಮಾತನಾಡಿ 'ವಿದ್ಯಾರ್ಥಿಗಳು ಕ್ಷೇತ್ರದ ಮಿತಿಯಿಲ್ಲದೇ ತಮ್ಮನ್ನು ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಾಗ ಮಾತ್ರವೇ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ' ಎಂದು ವಿವರಿಸಲಾಯಿತು. ನಂತರದಲ್ಲಿ ಅತಿಥಿಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಯುತ ಶ್ರೀವತ್ಸರವರು ಹಾಗೂ ಶ್ರೀಯುತ ಮಧುಸೂಧನ್ ಅವರು, ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಪೂರ್ಣಿಮ ಎನ್ ಶ್ರೀಧರರವರು ಹಾಗೂ ಶ್ರೀಮತಿ ಲಕ್ಷ್ಮಿ ರವರು, ಬೋಧಕ-ಬೋಧಕೇತರ ಸಿಬ್ಬಂದಿಯವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











































No comments:

Post a Comment